
ನರಳದಿರು ಮನವೆ
ನರಳದಿರು ನಲ್ಲೆಯ ನೆನೆದು.
ನದಿಯಾಗಿ ಹರಿದು
ಪ್ರವಾಹವಾಗಿ ಕೊಚ್ಚಿ
ಹೋದ ಪ್ರೀತಿಯ ನೆನೆದು.
ಹೂಮೊಗ್ಗು ಅರಳುವ ಮುನ್ನ
ನಾಚಿ ನೀರಾದ ಬಗೆ
ಶುರುವಾದ ಹುಚ್ಚು
ಮನಸ್ಸಿನ ಪ್ರೀತಿಯ ನೆನೆದು.
ನಕ್ಕು ನಲಿವ ಬಗೆ
ಕಂಡು ಕನಸುಗಳ ಸುರಿಮಳೆಗೈದ
ಸುಗಮ ದಿನಗಳಾ ನೆನೆದು.
ನೀನು ಬಹುದೂರ ಸಾಗಿ ಬಂದಾಗಿದೆ
ಸಿಗಬಹುದು ಇಲ್ಲೊಂದು ಅದನ್ನೆಲ್ಲಾ
ಮರೆಸುವ ತವರು.
ನರಳದಿರು ಮನವೆ
ನರಳದಿರು ನಲ್ಲೆಯ ನೆನೆದು.
