Thursday, June 23, 2011

"ಅಮ್ಮ"

ಅವಳು ಪ್ರೀತಿಯ ಕಡಲು
ಜೀವ ಮೀರಿ ದುಡಿವಳು ಕಂದನ ಒಳಿತಿಗೆ ದಿನಾಲು.
ಅವಳ ಮಡಿಲು ಸಿಕ್ಕರೆ ಸಾಕ
ಕಂದ ಮರೆವನು ಜಗತ್ತಿನ ನಾಕ.

ನಿನ್ನ ಅಕ್ಕರೆಯ ಮೀರಿ
ಏನಿದೆ ಇಲ್ಲಿ ನನ್ನ ತಾಯಿ ?
ನೀನಿಲ್ಲದೆ ನಾನಿರಲಿಲ್ಲ
ನಿನ್ನಿಂದಲೇ ನನ್ನ ಜೀವನ ಬೆಲ್ಲ.

ತಾಯಿ ದುಡಿದಳು ಹಗಲು ರಾತ್ರಿ,
ನೆರಳು ಬಂದಾಗ ಹಿಗ್ಗಲಿಲ್ಲ
ಬಿಸಿಲು ಬಂದಾಗ ಕುಗ್ಗಲಿಲ್ಲ, ಕತ್ತಲೆಗೆ ಹೆದರಲಿಲ್ಲ.
ಅವಳು ನಡೆದಲು ಆನೆ ನಡೆದ ದಾರಿಯಂತೆ.

ಕೂಗಿದರು, ಕರೆದರು, ಜರಿದರು, ದೂರಿದರು
ಗಂಡನಿಲ್ಲದ ಹೆಂಗಸು ಹೇಗೆ ಬದುಕೀತು ಎಂದು.
ಅವಳು ಕೂಗಿಗೆ ಕಿವಿಗೊದಲಿಲ್ಲ, ದೂರಿಗೆ ಮನಗೋಡಲಿಲ್ಲ
ಸಾಗಿ ಬಂದಳು ಬಿರುಗಾಳಿಗೆ ಸಿಕ್ಕ ದೋಣಿ ದಡ ಸೇರಿದಂತೆ.

ನನಗೆ ಗೊತ್ತು ನನ್ನ ತಾಯಿ
ನೀನು ಕಷ್ಟಪಟ್ಟು ಬದುಕಿ ಬಾಳಿದ್ದು ನನಗಾಗಿ ಎಂದು.
ನಾನು ಮರೆಯುವುದಿಲ್ಲ ನನ್ನ ತಾಯಿ
ನಿನ್ನ ಕಷ್ಟದ ಬದುಕು ನನ್ನ ಸುಗಮ ಜೀವಕೆ ಸೋಪಾನವಾಯಿತೆಂದು.

ಬೆನ್ನು ಬಾಗಿ, ಮರೆವು ಶುರುವಾಗಿ
ರೋಗ ಬಂದರೂ ದುಡಿದಳು ನನ್ನ ಒಳಿತಿಗಾಗಿ.
ಇಲ್ಲದಿದ್ದರೆ ಸಾಕಿತ್ತು ಒಂದು
ರೊಟ್ಟಿ ಊಟದ ಕೆಲಸ ನಿನ್ನ ಹೊಟ್ಟೆಗಾಗಿ.

ನನಗೆ ಯಾವ ದೇವರೂ ಗೊತ್ತಿಲ್ಲ
ನಿನ್ನ ಹೋಲಿಸಿ, ಹಾಡಿ ಹೊಗಳಲು.
ಇಲ್ಲಿ ಇರುವ ದೇವರೆಲ್ಲ ಇರುವುದು
ದಿನಕ್ಕೊಂದು ಬಲಿ ಬೇಡಿ ಕುಣಿಯಲು.

ಹೆಣ್ನ ಜರಿದು ಮಣ್ಣು ತಿಂದರು.
ಮಣ್ಣಿನ ಮಗನಿಗೆ ಗೊತ್ತು, ಹೆಣ್ಣೇ ಮನೆಯ ಸ್ವತ್ತು.
ತಾಯಿ ನಿನಗಿದೋ ಕೋಟಿ ವಂದನೆ,
ನನ್ನ ಜಗತ್ತಿಗೆ ತಂದಿರುವುದಕ್ಕೆ ನೂರು ಅಭಿನಂದನೆ.

"ನನ್ನ ಜೀವ"



ಪ್ರಿಯೆ ನಿನ್ನ ನೋಡಿದ ಕ್ಷಣದಿಂದ
ನನ್ನ ಮನವ ಆವರಿಸಿದೆ ನಿನ್ನ ಅಂದ.
ನಾ ಕನವರಿಸುತಿರುವೆ ನಿನ್ನ ಚಂದ.

ನಿನ್ನ ನೀಳ ಕಂಗಳ ಚಲುವ
ಹೇಗಂತ ಹೊಗಳಲಿ ನನ್ನ ಒಲವ ?
ಕೇದಿಗೆ ಗರಿಗೂ ಮೀರಿದ ಹೊಳಪು
ನನ್ನ ಪ್ರೀತಿಯ ನಯನಕೆ ಮುಡಿಪು.

ಮೆಲ್ಲ ಮೆಲ್ಲನೆ ಬೀಸುವ ತಂಗಾಳಿಗೆ
ವೀಣೆಯ ತಂತಿಯಂತೆ ಅಲುಗಾಡುವ
ನಿನ್ನ ಕೇಶ ರಾಶಿಯಿಂದ ಹೊರಬಿದ್ದ
ನೂರಾರು ಕೇಶದಲ್ಲಿ ನಿನ್ನ ಅಂದ ಆದೆಸ್ಟು ಚನ್ನ.

ನೀ ನಡೆವ ದಾರಿಗೆ ಹೂ ಹಾಸುವಾಸೆ
ಬರಲಿ ಹುಡುಕಿ ನನ್ನ ಅವಕಾಶ,
ನೀನು ನಡೆದು ಸುಸ್ತಾದರೆ
ನನ್ನ ತೊಳಲ್ಲಿ ನಿನ್ನ ಮಲಗಿಸುವಾಸೆ.

ನನ್ನ ಒಲವೆ ನಿನಗೆ ಒಂಚೂರು
ನೋವಾಗಬಾರದು.
ನಮ್ಮಿಬ್ಬರ ಪ್ರೀತಿ ನೋವಲ್ಲಿ
ಎಂದೂ ಬಳಲಬಾರದು.

"ಒಂದು ತಿಳು ಬೆಳದಿಂಗಳು"



ನಲ್ಮೆಯ ನೋಡಲು
ಸವಿ ಮಾತನಾಡಲು
ತಿಳು ಬೆಳದಿಂಗಳು
ಹೊಸೆಯಿತು ಪ್ರೀತಿಯ, ಹಗ್ಗವನು

ಜಸ್ಟ್ ಮಾತ್ ಮಾತಲ್ಲಿ
ನಲ್ಮೆಯ ಸೊಂಪಾದ ಚೆಲುವಲ್ಲಿ
ಚಂದ್ರನ ತಂಪಾದ ಬೆಳಕಲ್ಲಿ
ಹಿರಿ ಹಿರಿ ಹಿಗ್ಗಿದರು, ಪ್ರೇಮಿಗಳಿಬ್ಬರು

ಬೆಳಗಿತು ಭೂ ಮುಗಿಲು
ಹೊಳೆಯಿತು ಪ್ರೀತಿಯ ಹೊನಲು
ಹರಿಯಿತು ಸಂತೋಷದ ತಿರುಳು
ಪ್ರೇಮಿಗಳಾಗಿದ್ದರು, ಒಂದು

ಸಮಯದೊಂದಿಗೆ ಸಮಾಗಮ
ನಲುಮೆಯೊಂದಿಗೆ ಪ್ರೀತಿಯಾಗಮ
ಪಸರಿಸಿತ್ತು ಸುವಾಸನೆ ಘಮ ಘಮ
ಅರಳಿತ್ತು ಅಲ್ಲೊಂದು ಒಲವಿನ, ಹೂ.

Wednesday, July 28, 2010

ಮತ್ತೆ ಮಳೆಗಾಲ



ಆ ದಿನಗಳು, ನಿಮಗೆ ನೆನಪಾಗಬಹುದು ಕನ್ನಡದ ನವ ನಿರ್ದೇಶಕ ಚೈತನ್ಯರವರು ನಿರ್ದೇಶಿಷಿದ ಚಿತ್ರ. ಆದರೆ ನಾನು ಹೇಳುತ್ತಿರುವುದು ಬೇರೆ ದಿನಗಳ ಬಗ್ಗೆ, ನನ್ನ ಮನಸ್ಸಿನ ಕರಾಳ ನೆನಪಿನ ಅಂಗಳದಲ್ಲಿ ಬೇಡವೆಂದರೂ ಆ ದಿನಗಳು ನೆನಪಾಗುತ್ತಿವೆ. ಏಕೆಂದರೆ ನಮ್ಮ ಉತ್ತರ ಕರ್ನಾಟಕದ ಬಹು ಭಾಗದಲ್ಲಿ ಮತ್ತೆ ಮಳೆ ಶುರುವಾಗಿದೆ. ಎಲ್ಲ ರೈತರು ಮೇ ತಿಂಗಳಿನಿಂದ ಜೂನ್, ಜುಲೈ ವರೆಗೂ ಕಾದು ಕಾಳು ಬಿತ್ತುವ ಕಾತರದಿಂದ ಹುಯ್ಯದ ಮಳೆರಾಯನಿಗೆ ಶರನಾಗಿದ್ದರು. ಈಗ ಏಳೆಂಟು ದಿನಗಳಿಂದ ಜಿಟಿ ಜಿಟಿ ಬಿಟ್ಟು ಬಿಡದೆ ಮಳೆ ಶುರುವಾಗಿದೆ.

ನೆನಪಾಗಲು ಕಾರಣ, ತೀರಾ ವಿರಳ ಎಂದರೂ ನನಗೆ ತಿಳಿದಂತೆ ೨೫ ವರ್ಷಗಳಲ್ಲಿ ಕೃಷ್ಣ ಮತ್ತು ಘಟಪ್ರಭ ನದಿ ಪ್ರವಾಹಕ್ಕೆ ೪ ರಿಂದ ೫ ಸಾರಿ ನದಿಯ ಆಸುಪಾಸಿನ ಜನರು ತುತ್ತಾಗಿದ್ದಾರೆ. ಅವರ ಆಸ್ತಿ-ಪಾಸ್ತಿ, ಡನ-ಕರು ಪ್ರತಿ ಸಾರಿಯೂ ಕೊಚ್ಚಿ ಹೋಗಿತ್ತು. ಬೆಳೆಗಳೆಲ್ಲವೂ ನಾಶವಾಗಿ ಮತ್ತೆ ಅವು ಸಾಮಾನ್ಯ ಸ್ಟೀತಿಗೆ ಬರಲು ಎಸ್ಟೋ ತಿಂಗಳುಗಳೇ ಬೇಕು. ಇಂತಾ ಎಲ್ಲ ವಿಕೋಪಗಳಿಗೆ ತುತ್ತಾಗುತ್ತಾ ಬಂದಿರುವ ನಮ್ಮ ಜನ ಇಂದಿನ ಆಧುನಿಕ ಜಗತ್ತಿನ ಸರ್ಕಾರಗಳು ಸೃಷ್ಟೀಸಿರುವ ಹವಾಮಾನ ಇಲಾಖೆಯವರು ಬಾತ್ಮಿ ನೀಡಿಯಾರು ಎಂದು ನೋಡಿದರೆ ಏನೂ ಪ್ರಯೋಜನವಾಗುತ್ತಿಲ್ಲ. ಏನಾದರೂ ಇದು ಮನುಕುಲದ ಜೊತೆಯಲ್ಲೇ ಹುಟ್ಟಿ ಬೆಳೆದ ಪ್ರಕೃತಿ ವಿಕೋಪ. ಇದನ್ನು ತಡೆಯಲು ಯಾರಿಂದಲೂ ಸಾಧೈವಿಲ್ಲ ಎಂಬ ನಂಬಿಕೆ ನನ್ನದು, ಆದರೆ ಮುನ್ಸೂಚನೆಯಂತೆ ಜನರಿಗೆ ಮಾಹಿತಿ ನೀಡಿ ಅವರಿಗೆ ಬೇರೆ ವ್ಯವಸ್ತೆ ಮಾಡುವ ಕೆಲಸವನ್ನೋ ನಮ್ಮ ಯಾವುದೇ ಇಲಾಖೆ ಮಾಡದಿರುವುದು ವಿಪರ್ಯಾಸ.

ಹೋದ ವರ್ಷದ ವಿಕೋಪ ಬಿಟ್ಟರೆ, ೨೦೦೫ ರಲ್ಲಿ ಕೃಷ್ಣ ನದಿಯ ಪ್ರವಾಹಕ್ಕೆ ಸಾವಿರಾರು ಜನ ತುತ್ತಾದರು, ಸುಮಾರು ಲಕ್ಷ ಹೆಕ್ಟೆರ್ ಭೂಮಿ ಜಲಾವೃತವಾಯಿತು. ಆಗಲೂ ನಮ್ಮ ಕೇಂದ್ರದಲ್ಲಿ ಇದೆ ಸರ್ಕಾರ ಇತ್ತು. ಮುಂದಿನ ವರ್ಷದಲ್ಲಿ ಸಂಸತ್ತು ಚುನಾವಣೆ ಇದ್ದ ಕಾರಣ ಪ್ರವಾಹಕ್ಕೆ ತುತ್ತಾಗಿದ್ದ ಎರಡು ರಾಜ್ಯಗಳಾದ ಕರ್ನಾಟಕ ಮತ್ತು ಆಂದ್ರಕ್ಕೆ ನಮ್ಮ ಇಂದಿನ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಬಂದು ಮನ ಬಂದಂತೆ ಹಣ ಹಂಚಿ ಹೋಗಿದ್ದರು. ಆದರೆ ೨೦೦೯ ನೇ ಸಾಲಿನಲ್ಲಿ ಹಾಗಾಗಲಿಲ್ಲ ಬಂದು ನೋಡಿ ಹೋಗುವುದಾಗಲಿ, ಹಣ ಬಿಡುಗಡೆಯಲ್ಲ್ಲಿ ಕೂಡ ಮಲತಾಯಿ ಧೋರಣೆ ತೋರಿದರು.

ಇತ್ತ ಕರ್ನಾಟಕ ಸರ್ಕಾರ ತನ್ನದೇ ಸಮಸ್ಯೆಗಳಿಗೆ ತುತ್ತಾಗಿ ಆ ಸಮಸ್ಯೆಗಳಿಂದ ಹೊರ ಬರಲು ಹರ ಸಾಹಸ ನಡೆಸಿದೆ. ಯಾಡಿಯುರಪ್ಪನವರ ಸರ್ಕಾರ ಹೋದ ವರ್ಷದ ಪ್ರವಾಹಕ್ಕೆ ತುತ್ತಾದ ಜನರ ವಾಸಕ್ಕಾಗಿ ಮನೆ ಕಟ್ಟಿಸಿ ಕೊಡಲು ಆಸರೆ ಎಂಬ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದರು. ಅದರ ಉಪಯೋಗ ಎಷ್ಟೊಂದು ಜನರಿಗೆ ದೊರಕಿದೆ ಎಂಬುದು ಕಾಕತಾಳೀಯ. ದೂರದ ಜನರಿರಲಿ ಅದೇ ಊರಲ್ಲೇ ಬೆಳೆದು ಅಲ್ಲೇ ತಿಂದು ಬದುಕಿ ಬಾಳುವ ಮನುಷ್ಯ ಪಂಚಾಯತ್ ಅಧ್ಯಕ್ಷ್ಯ ತನ್ನ ಜನರಿಗೆ ಸರ್ಕಾರ ಕೊಟ್ಟ ಹಣದಿಂದ ವಸತಿ ಕಲ್ಪಿಸಿ ಕೊಡಲು ಮುಂದಾಗದೆ, ಬಂದ ಹಣ ತಿಂದು ತೇಗೂತ್ತಿದ್ದಾನೆ. ಇದಕ್ಕೆ ಕನ್ನಡ ದಿನಪತ್ರಿಕೆಗಲ್ಲಿ ಪ್ರಕಟವಾಗುವ ನೂರಾರು ಸುದ್ದಿಗಳೇ ಸಾಕ್ಷಿ.

ಇವೆಲ್ಲ ಸಮಸೈಗಳಿಗೆ ದಾರಿ ಹುಡುಕುತ್ತಾ ಕುಂತಿರುವ ರೈತನಿಗೆ ಮತ್ತೆ ಈ ಸಾರಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯ ಹೆದರಿಕೆ ಶುರುವಾಗಿದೆ. ಮತ್ತೆ ಕಳೆದ ಸಾರಿಯ ಪರಿಸ್ತಿತಿ ಬರದಿರಲೆಂದು ಮಳೆರಾಯಣಲ್ಲಿ ಹಾಗೂ ಅದಕ್ಕೆ ತಕ್ಕ ಕಾರ್ಯಕ್ರಮಗಳನ್ನು ನಮ್ಮ ಘನ ಕರ್ನಾಟಕ ಸರ್ಕಾರ ರೂಪಿಸಲಿ ಎಂದು ಬೇಡಿಕೊಳ್ಳುತ್ತೇನೆ.

Sunday, July 25, 2010

ಗೆಳತಿ

ಗೆಳತಿ ನಿನ್ನ ನೋಡಿದ ಈ ಕಣ್ಣು
ಕಂಡಿದೆ ನೂರಾರು ಕನಸು,
ನಿನಗಕೆ ನನ್ಮೆಲೆ ಮುನಿಸು?

ಕನಸು ಮೂಡಿ ಬರುತಿವೆ
ದಿನಕ್ಕೊಂದು ನನ್ನ ಮನದಲಿ,
ಮಳೆ ಸುರಿವ ಹಾದಿಗೆ ತೆರಳುವ ಮೋಡದಂತೆ.

ಮೋಡವೋ ಹೇಳುತಿದೆ ಅದರ
ತೊಳಲಾಟವನ್ನು ಮಿಂಚನು ಬೀರಿ
ನನಗಿಲ್ಲ ಅಂತ ಕ್ರೌರ್ಯ ಭಾವ, ನನ್ನ ನಾರಿ.

ಬಿಡಿಸುವ ಬಾರೆ ಕನಸಿನ ಕಂತೆ
ಉದಿಸಲಿ ನಮ್ಮಿಬ್ಬರ ಮನಸಿನ ಸಂತೆ
ಬಾರೆ ನನ್ನ ಚಕೋರಿ ಮನಸಿಗೆ ಕನ್ನಡಿ ಹಿಡಿದಂತೆ.

ಹಗಲ್‌ಗನಸು ಸಾಕು, ಇನ್ನೊಂದು ಕನಸೂ ಸಾಕು
ಬಾರೆ ಅಂತ್ಯ ಹಾಡುವ ಕನಸಿನ ಲೋಕಕೆ
ನಾಂದಿಯ ಹಾಡುವ ನನಸಿನ ಲೋಕಕೆ

ನನ್ನ ನಲ್ಲೆ


ನನ ನಲ್ಲೆ ದೂರಾದೆ ನೀನು
ಬರಲಿಲ್ಲವೆ ನನ ನೆನಪೆನು?

ನೀನಿಲ್ಲದ ಬಾಳು
ಅವಹೇಳನದ ಗೋಳು
ನೀಣಿದ್ದರೆ ನನಗೆ
ಅದುವೆ ಜೀನ ಹುಳು.

ನಿನ ದಾರಿ ಕಾದೆ
ನಾ ಹಗಲಿರುಳು
ನೀ ಬರದೇ ಹೋದೆ
ನಾನಾದೆ ಮರುಳು

ಪ್ರೀತಿ ತುಂಬಿದ ಜೀವಕೆ
ಮೃಸ್ಟನ್‌ನವೇ ನೀನು
ಬೇಡಿ ಕಾಡುವ ಮನಕೆ
ಮರುಜನ್ಮವೇ ನೀನು

ಇಷ್ಟು ಪ್ರಶಂಸೆಯ
ಮಾತುಗಳು ಸಾಕಿನ್ನು
ಬಂದು ಕರೆದು ಕೂರಿಸಿ
ಆಡುವೆಯಾ ನಾಲ್ಕು ಮಾತನ್ನು

ಈ ಜೀವ ಹೋದರೂ ಸರಿಯೇ
ನಿನ ದಾರಿ ಕಾಯ್ವುದು ನನ ಗುರಿಯೇ
ಬಾರೆ ನಲ್ಲೇ ಒಮ್ಮೆ ಮರೆಯಾಗಿ
ನಾ ಹೋದೆ ನಿನ್ನ ಸೆರೆಯಾಗಿ

"ನನ್ನ ಹಾಡು"



ಬರೆಯುವಾಗಲೂ ಬರುವೆ
ಹಗಲುಗನಸಲೂ ಬರುವೆ
ನೀ ಬಂದ ಆ ಕ್ಷಣ
ನನ್ನೆದೆಯೇ ತಲ್ಲಣ !!

ನಿನ್ನ ನೆನಪು ನನ್ನೆದೆಯಲಿ
ಸಸಿಯಾಗಿ ಚಿಗುರುವಾಗ
ನೀರಾಗಿ ಬಾ, ನನ್ನ ಹುಣ್ಣಿಮೆ
ಬೆಳದಿಂಗಳ ಚಂದ್ರ ನೀ !!

ನನ್ನೊಲುಮೆ ಸಸಿಯ
ಹೂವಾಗಿ, ಸುವಾಸನೆಯಾಗಿ
ಈ ಮನವ ಬೆಳಗು ಬಾ
ನನ್ನ ಒಲವ ಪುಟದ ಅಕ್ಷರ ನೀ !!

ಹಣ್ಣಾಗಿ ಮಣ್ಣಾಗುವವರೆಗೂ
ನಿನ್ನೊಂದಿಗೆ ಬದುಕುವ ಕಾತರ
ಇನ್ನೊಮ್ಮೆ ಕಣ್ಮೂಚುವೆ ಸದ್ದಿಲ್ಲದೆ
ಬಾ ನನ್ನ ಮೌನಕೆ ರಾಗವಾಗಿ !!