Thursday, June 23, 2011

"ಅಮ್ಮ"

ಅವಳು ಪ್ರೀತಿಯ ಕಡಲು
ಜೀವ ಮೀರಿ ದುಡಿವಳು ಕಂದನ ಒಳಿತಿಗೆ ದಿನಾಲು.
ಅವಳ ಮಡಿಲು ಸಿಕ್ಕರೆ ಸಾಕ
ಕಂದ ಮರೆವನು ಜಗತ್ತಿನ ನಾಕ.

ನಿನ್ನ ಅಕ್ಕರೆಯ ಮೀರಿ
ಏನಿದೆ ಇಲ್ಲಿ ನನ್ನ ತಾಯಿ ?
ನೀನಿಲ್ಲದೆ ನಾನಿರಲಿಲ್ಲ
ನಿನ್ನಿಂದಲೇ ನನ್ನ ಜೀವನ ಬೆಲ್ಲ.

ತಾಯಿ ದುಡಿದಳು ಹಗಲು ರಾತ್ರಿ,
ನೆರಳು ಬಂದಾಗ ಹಿಗ್ಗಲಿಲ್ಲ
ಬಿಸಿಲು ಬಂದಾಗ ಕುಗ್ಗಲಿಲ್ಲ, ಕತ್ತಲೆಗೆ ಹೆದರಲಿಲ್ಲ.
ಅವಳು ನಡೆದಲು ಆನೆ ನಡೆದ ದಾರಿಯಂತೆ.

ಕೂಗಿದರು, ಕರೆದರು, ಜರಿದರು, ದೂರಿದರು
ಗಂಡನಿಲ್ಲದ ಹೆಂಗಸು ಹೇಗೆ ಬದುಕೀತು ಎಂದು.
ಅವಳು ಕೂಗಿಗೆ ಕಿವಿಗೊದಲಿಲ್ಲ, ದೂರಿಗೆ ಮನಗೋಡಲಿಲ್ಲ
ಸಾಗಿ ಬಂದಳು ಬಿರುಗಾಳಿಗೆ ಸಿಕ್ಕ ದೋಣಿ ದಡ ಸೇರಿದಂತೆ.

ನನಗೆ ಗೊತ್ತು ನನ್ನ ತಾಯಿ
ನೀನು ಕಷ್ಟಪಟ್ಟು ಬದುಕಿ ಬಾಳಿದ್ದು ನನಗಾಗಿ ಎಂದು.
ನಾನು ಮರೆಯುವುದಿಲ್ಲ ನನ್ನ ತಾಯಿ
ನಿನ್ನ ಕಷ್ಟದ ಬದುಕು ನನ್ನ ಸುಗಮ ಜೀವಕೆ ಸೋಪಾನವಾಯಿತೆಂದು.

ಬೆನ್ನು ಬಾಗಿ, ಮರೆವು ಶುರುವಾಗಿ
ರೋಗ ಬಂದರೂ ದುಡಿದಳು ನನ್ನ ಒಳಿತಿಗಾಗಿ.
ಇಲ್ಲದಿದ್ದರೆ ಸಾಕಿತ್ತು ಒಂದು
ರೊಟ್ಟಿ ಊಟದ ಕೆಲಸ ನಿನ್ನ ಹೊಟ್ಟೆಗಾಗಿ.

ನನಗೆ ಯಾವ ದೇವರೂ ಗೊತ್ತಿಲ್ಲ
ನಿನ್ನ ಹೋಲಿಸಿ, ಹಾಡಿ ಹೊಗಳಲು.
ಇಲ್ಲಿ ಇರುವ ದೇವರೆಲ್ಲ ಇರುವುದು
ದಿನಕ್ಕೊಂದು ಬಲಿ ಬೇಡಿ ಕುಣಿಯಲು.

ಹೆಣ್ನ ಜರಿದು ಮಣ್ಣು ತಿಂದರು.
ಮಣ್ಣಿನ ಮಗನಿಗೆ ಗೊತ್ತು, ಹೆಣ್ಣೇ ಮನೆಯ ಸ್ವತ್ತು.
ತಾಯಿ ನಿನಗಿದೋ ಕೋಟಿ ವಂದನೆ,
ನನ್ನ ಜಗತ್ತಿಗೆ ತಂದಿರುವುದಕ್ಕೆ ನೂರು ಅಭಿನಂದನೆ.

No comments:

Post a Comment